Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕ್ಷಮಿಸಲಾಗದ ಪಾಪ

    ಪವಿತ್ರಾತ್ಮನಿಗೆ ವಿರುದ್ಧವಾದ ಪಾಪವೆಂದರೇನು? ಪವಿತ್ರಾತ್ಮನ ಕಾರ್ಯವನ್ನು ಇದು ಸೈತಾನನಿಂದ ಆದದ್ದು ಎಂದು ಬೇಕೆಂದೇ ಉದ್ದೇಶಪೂರ್ವಕವಾಗಿ ಕಾರಣ ಕೊಡುವುದು ಪವಿತ್ರಾತ್ಮನಿಗೆ ವಿರುದ್ಧವಾದ ಪಾಪವಾಗಿದೆ. ಉದಾಹರಣೆಗೆ ಒಬ್ಬ ವ್ಯಕ್ತಿಯು ದೇವರಾತ್ಮನ ವಿಶೇಷವಾದ ಕಾರ್ಯವನ್ನು ಕಣ್ಣಾರೆ ನೋಡಿದ್ದಾನೆಂದು ತಿಳಿದುಕೊಳ್ಳಿ. ಈ ವಿಶೇಷವಾದ ಕಾರ್ಯವು ಸತ್ಯವೇದಕ್ಕೆ ಸಾಮರಸ್ಯವಾಗಿದೆ ಎಂದು ಅವನಿಗೆ ಸಾಕ್ಷ್ಯಾಧಾರವಾಗಿ ಮನವರಿಕೆಯಾಗಿದೆ ಹಾಗೂ ಇದು ದೇವರಿಂದಲೇ ಆದದ್ದು ಎಂದು ಪರಿಶುದ್ಧಾತ್ಮನು ಅವನ ಮನಸ್ಸಿನಲ್ಲಿ ಸಾಕ್ಷಿ ನುಡಿಯುತ್ತಾನೆ. ಆದರೆ ಅನಂತರ ಈ ವ್ಯಕ್ತಿಯು ಶೋಧನೆಗೊಳಗಾಗಿ ಅಹಂಕಾರ, ದುರಭಿಮಾನ ಹಾಗೂ ಇತರ ಕೆಟ್ಟ ಗುಣಗಳಿಂದ ನಿಯಂತ್ರಿಸಲ್ಪಟ್ಟು, ಆ ವಿಶೇಷ ಕಾರ್ಯವು ದೇವರಿಂದ ನಡೆಯಿತೆಂಬ ಸಾಕ್ಷ್ಯಾಧಾರಗಳನ್ನು ತಿರಸ್ಕರಿಸಿ, ಮೊದಲು ಪರಿಶುದ್ಧಾತ್ಮನ ಶಕ್ತಿಯೆಂದು ಒಪ್ಪಿಕೊಂಡದ್ದನ್ನು ಈಗ ಸೈತಾನನ ಕಾರ್ಯವೆಂದು ಹೇಳಿಕೊಂಡಲ್ಲಿ ಅದು ಪವಿತ್ರಾತ್ಮನಿಗೆ ವಿರುದ್ಧವಾದ ಪಾಪವಾಗಿದೆ. ದೇವರು ತನ್ನ ಪವಿತ್ರಾತ್ಮನ ಮಾಧ್ಯಮದ ಮೂಲಕ ಮಾನವರ ಹೃದಯದಲ್ಲಿ ಕಾರ್ಯಮಾಡುತ್ತಾನೆ. ಆದರೆ ಮನುಷ್ಯರು ಉದ್ದೇಶಪೂರ್ವಕವಾಗಿ ಪವಿತ್ರಾತ್ಮನನ್ನು ತಿರಸ್ಕರಿಸಿ, ಈ ವಿಶೇಷಕಾರ್ಯವು ಸೈತಾನನಿಂದ ಬಂತೆಂದು ಹೇಳಿದಾಗ, ದೇವರು ಅವರ ಮೂಲಕ ಮಾತನಾಡುವ ಮಾಧ್ಯಮವನ್ನು ಕಡಿದುಕೊಳ್ಳುತ್ತಾರೆ. ದೇವರು ಸಂತೋಷದಿಂದ ಕೊಡುವ ಸಾಕ್ಷ್ಯಾಧಾರಗಳನ್ನು ನಿರಾಕರಿಸುವ ಮೂಲಕ, ಅವರು ತಮ್ಮ ಹೃದಯಗಳಲ್ಲಿ ಹೊಳೆಯುತ್ತಿರುವ ದೈವೀಕ ಬೆಳಕನ್ನು ನಂದಿಸುತ್ತಾರೆ. ಇದರ ಪರಿಣಾಮವಾಗಿ ಅವರ ಹೃದಯದಲ್ಲಿ ಆತ್ಮೀಕ ಕತ್ತಲು ಆವರಿಸುತ್ತದೆ. ಈ ಕಾರಣದಿಂದಲೇ ಕ್ರಿಸ್ತ ಯೇಸು “.... ನಿನ್ನೊಳಗಿರುವ ಬೆಳಕೇ ಕತ್ತಲಾದರೆ, ಆ ಕತ್ತಲು ಎಷ್ಟೆನ್ನಬೇಕು!” ಎಂದು ಹೇಳಿದ್ದಾನೆ (ಮತ್ತಾಯ 6:23). ಈ ಪಾಪ ಮಾಡಿದ ವ್ಯಕ್ತಿಗಳು ಅಲ್ಪಕಾಲದವರೆಗೆ ದೇವರ ಮಕ್ಕಳಂತೆ ಕಂಡು ಬರಬಹುದು, ಆದರೆ ಅವರ ಗುಣಸ್ವಭಾವ ಉತ್ತಮ ಪಡಿಸಿಕೊಳ್ಳುವ ಸಂದರ್ಭ ಹಾಗೂ ಅವರಲ್ಲಿ ಎಂಥಾ ವಿಧವಾದ ಆತ್ಮನಿದ್ದಾನೆಂದು ತೋರಿಸುವ ಸಮಯ ಒದಗಿದಾಗ, ಅವರು ಸೈತಾನನ ಪರವಾಗಿ ಅವನ ಪಾಪದ ಕಪ್ಪು ಧ್ವಜದಡಿಯಲ್ಲಿ ನಿಂತಿದ್ದಾರೆಂದು ತಿಳಿದುಬರುವುದು. KanCCh 66.2