Loading...
Larger font
Smaller font
Copy
Print
Contents
ಕ್ರೈಸ್ತ ಸಭೆಗೆ ಹಿತವಚನಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ತಂದೆ-ತಾಯಿಯರು ಸಮ್ಮತಿಸಬೇಕು

    ಮಕ್ಕಳು ಸಹಜವಾಗಿಯೇ ಪ್ರೀತಿಯ ಸ್ವಭಾವವುಳ್ಳವರಾಗಿದ್ದು ಬಹುಬೇಗನೆ ಪ್ರಚೋದನೆಗೆ ಒಳಗಾಗುತ್ತಾರೆ. ಅವರು ಬೇಗನೆ ಸಂತೋಷಗೊಳ್ಳುತ್ತಾರೆ ಹಾಗೂ ಅಷ್ಟೇ ಬೇಗನೆ ದುಃಖಕ್ಕೆ ಒಳಗಾಗುತ್ತಾರೆ. ಪ್ರೀತಿಯ ಮಾತುಗಳಿಂದ, ನಯವಾದ ನಡುವಳಿಕೆಯ ಮೂಲಕ ಅವರಿಗೆ ಸೌಮ್ಯವಾದ ಶಿಸ್ತು ಕಲಿಸುವುದರ ಮೂಲಕ ತಾಯಂದಿರು ಮಕ್ಕಳ ಪ್ರೀತಿಗಳಿಸುತ್ತಾರೆ. ಅವರ ಮೇಲೆ ತಂದೆ-ತಾಯಿಯರು ಕಠಿಣವಾದ ದರ್ಪ ತೋರಿಸಿ ಬಲವಂತ ಪಡಿಸುವುದು ದೊಡ್ಡತಪ್ಪಾಗಿದೆ. ಯಾವುದೇ ರೀತಿಯ ಭಾವಾವೇಶತೋರದೆ, ದೃಢತೆಯಿಂದ ಮಕ್ಕಳನ್ನು ದೊಡ್ಡವರು ಶಿಸ್ತಿಗೆಒಳಪಡಿಸುವುದು ಅಗತ್ಯ. ನೀವು ಹೇಳಬೇಕಾದ್ದನ್ನು ಸಮಾಧಾನದಿಂದ ತಿಳುವಳಿಕೆ ನೀಡುವುದಲ್ಲದೆ, ವಿವೇಚನೆಯಿಂದ ವರ್ತಿಸಿ ಅವರಿಗೆ ನೇರವಾಗಿ ವಿವರಿಸಿ ಹೇಳಬೇಕು.KanCCh 229.3

    ತಂದೆ-ತಾಯಿಯರು ತಮ್ಮ ಬಾಲ್ಯದಲ್ಲಿ ಅನುಕಂಪ ಹಾಗೂ ಪ್ರೀತಿಗಾಗಿ ಎಷ್ಟೊಂದು ಹಂಬಲಿಸಿದ್ದೇವೆಂದೂ ಮತ್ತು ಪೋಷಕರು ಗದರಿಸಿದಾಗ ಎಷ್ಟೊಂದು ದುಃಖ, ಅಸಮಾಧಾನ ತಮಗೆ ಉಂಟಾಗಿತ್ತೆಂಬುದನ್ನು ನೆನಪಿಸಿಕೊಳ್ಳಬೇಕು. ಇದರ ಮೂಲಕ ತಮ್ಮಮಕ್ಕಳ ಆಸೆ ಆಕಾಂಕ್ಷೆಗಳೇನು ಎಂಬುದನ್ನು ತಿಳಿದುಕೊಳ್ಳಬೇಕು. ಆದರೂ ಪ್ರೀತಿಯಿಂದಲೂ ಹಾಗೂ ಅಷ್ಟೇ ದೃಢತೆಯಿಂದಲೂ ತಮ್ಮ ಮಕ್ಕಳಿಂದ ವಿಧೇಯತೆ ಪಡೆದುಕೊಳ್ಳಬೇಕು. ತಂದೆ-ತಾಯಿಯರ ಮಾತಿಗೆ ಮಕ್ಕಳು ಸಂಪೂರ್ಣ ಶ್ರದ್ಧೆಯಿಂದ ವಿಧೇಯರಾಗಬೇಕು.KanCCh 230.1

    ಮನೆಯಲ್ಲಿ ಪೋಷಕರು ದೃಢ ಚಿತ್ತದಿಂದ ಅಧಿಕಾರ ಚಲಾಯಿಸಬೇಕು. ಚಂಚಲಚಿತ್ತರಾದಲ್ಲಿ ಮಕ್ಕಳು ಅವರಿಗೆ ವಿಧೇಯತೆ ತೋರಿಸುವುದಿಲ್ಲ. ತಂದೆ-ತಾಯಿಯರು ದೈವಭಕ್ತಿಯುಳ್ಳವರು. ಆದರೆ ಯಾಕೆ ಮಕ್ಕಳು ಹಠಮಾರಿಗಳೂ, ಎದುರುತ್ತರ ಕೊಡುವವರೂ ಆಗಿದ್ದಾರೆಂಬ ಪ್ರಶ್ನೆ ಅನೇಕಸಾರಿ ಕೇಳಿಬರುತ್ತದೆ. ಅವರು ಮನೆಯಲ್ಲಿ ಪಡೆದುಕೊಂಡ ಶಿಕ್ಷಣವೇ ಇದಕ್ಕೆ ಕಾರಣವಾಗಿರುತ್ತದೆ. ಒಂದುವೇಳೆ ತಂದೆ-ತಾಯಿಯರು ಮಕ್ಕಳ ಅಭಿಪ್ರಾಯಕ್ಕೆ ಸಮ್ಮತಿಸದಿದ್ದರೆ, ಒಮ್ಮತಕ್ಕೆ ಬರುವತನಕ ಮಕ್ಕಳನ್ನು ಪ್ರಶ್ನಿಸಬಾರದು. ಅದರ ವಿಷಯ ತೆಗೆಯಬಾರದು.KanCCh 230.2

    ತಂದೆ-ತಾಯಿಯರಿಬ್ಬರೂ ಮಕ್ಕಳಿಗೆ ಶಿಕ್ಷಣ ನೀಡುವುದರಲ್ಲಿ ಒಂದೇ ಮನಸ್ಸುಳ್ಳವರಾಗಿದ್ದಲ್ಲಿ, ತಮ್ಮಿಂದ ಪೋಷಕರು ಏನು ಬಯಸುತ್ತಾರೆಂದು ಮಕ್ಕಳು ತಿಳಿದುಕೊಳ್ಳುತ್ತಾರೆ. ತಾಯಿಕೊಟ್ಟ ಶಿಕ್ಷೆಯನ್ನು ತಾನು ಒಪ್ಪಿಕೊಳ್ಳುವುದಿಲ್ಲವೆಂದು ತಂದೆ ತನ್ನ ಮಾತು ಅಥವಾ ನೋಟದ ಮೂಲಕ ತೋರಿಸಿದಲ್ಲಿ, ತನ್ನ ಹೆಂಡತಿಯು ಈ ವಿಷಯವಾಗಿ ಮಕ್ಕಳಿಗೆ ತುಂಬಾ ಕಠಿಣವಾಗಿ ನಡೆದುಕೊಳ್ಳುತ್ತಾಳೆಂದು ಗಂಡನು ಭಾವಿಸಿ ಸಿಡುಕು ತೋರಿಸಿದಲ್ಲಿ, ಮಕ್ಕಳು ಕೆಟ್ಟುಹೋಗುತ್ತಾರೆ. ಇದರಿಂದ ಮಕ್ಕಳು ತಮ್ಮ ಇಷ್ಟದಂತೆ ಮಾಡಬಹುದೆಂದು ತಿಳಿಯುತ್ತಾರೆ. ಮಕ್ಕಳಿಗೆ ವಿರುದ್ಧವಾಗಿ ಇಂತಹ ಪಾಪಮಾಡುವ ತಂದೆ-ತಾಯಿಯರು ಅವರ ನಾಶಕ್ಕೆ ತಾವೇ ಹೊಣೆಯಾಗುತ್ತಾರೆ.KanCCh 230.3

    ತಂದೆ-ತಾಯಿಯರು ಮೊದಲು ತಮ್ಮನ್ನು ನಿಯಂತ್ರಿಸಿಕೊಳ್ಳಲು ಕಲಿತಿದ್ದಲ್ಲಿ, ತಮ್ಮ ಮಕ್ಕಳನ್ನು ಚೆನ್ನಾಗಿ ಹತೋಟಿಯಲ್ಲಿಡುತ್ತಾರೆ. ಅವರು ತಮ್ಮ ಮೇಲಿನ ನಿಯಂತ್ರಣ ಕಳೆದುಕೊಂಡು, ಮಕ್ಕಳಿಗೆ ಕೋಪದಿಂದಲೂ, ಅಸಹನೆಯಿಂದಲೂ ಮಾತಾಡುವ ಪ್ರತಿಸಮಯದಲ್ಲಿಯೂ, ದೇವರಿಗೆ ವಿರುದ್ಧವಾಗಿ ಪಾಪ ಮಾಡುತ್ತಾರೆ. ಅವರು ವಿವೇಚನೆಯಿಂದ ಮಕ್ಕಳೊಂದಿಗೆ ಮಾತಾಡಿ, ಅವರ ತಪ್ಪುದೋಷ, ಪಾಪಗಳನ್ನು ಸ್ಪಷ್ಟವಾಗಿ ತಿಳಿಯಪಡಿಸಬೇಕು. ಅಲ್ಲದೆ ತಂದೆ-ತಾಯಿಯರಿಗೆ ಮಾತ್ರವಲ್ಲ, ದೇವರಿಗೆ. ವಿರುದ್ಧವಾಗಿ ಪಾಪ ಮಾಡಿದ್ದೀರೆಂದು ಮಕ್ಕಳಿಗೆ ತೋರಿಸಬೇಕು. ತಪ್ಪು ಮಾಡಿದ ಮಕ್ಕಳಿಗೆ ನೀವು ಸಂಪೂರ್ಣ ಅನುಕಂಪ ಹಾಗೂ ದಯೆ ತೋರಿಸಿ, ಅವರ ವರ್ತನೆಗೆ ದುಃಖಪಟ್ಟು, ಅವರನ್ನು ಶಿಕ್ಷಿಸುವ ಮೊದಲು ಅವರೊಂದಿಗೆ ತಂದೆ-ತಾಯಿಯರಾದ ನೀವು ಪ್ರಾರ್ಥಿಸಬೇಕು. ಆಗ ನೀವು ಕೊಡುವ ಶಿಕ್ಷೆಯು ನಿಮ್ಮ ಮಕ್ಕಳಲ್ಲಿ ನಿಮ್ಮ ಬಗ್ಗೆ ದ್ವೇಷ ಉಂಟುಮಾಡುವುದಿಲ್ಲ ಮತ್ತು ಅವರು ನಿಮ್ಮನ್ನು ಪ್ರೀತಿಸುವರು. ಆಗ ನೀವು ಅವರನ್ನು ಶಿಕ್ಷೆಗೆ ಒಳಪಡಿಸಿದ್ದು ಸೇಡಿನಿಂದಲ್ಲ ಅಥವಾ ನಿಮಗೆ ದುಃಖ ಉಂಟು ಮಾಡಿದ್ದರಿಂದಲ್ಲ, ಬದಲಾಗಿ ತಮ್ಮ ಒಳ್ಳೆಯದಕ್ಕಾಗಿ ತಂದೆ-ತಾಯಿಯರಾಗಿ ನೀವು ನಿಮ್ಮ ಕರ್ತವ್ಯ ನಿರ್ವಹಿಸಿದ್ದೇನೆಂದು ಮಕ್ಕಳು ತಿಳಿದುಕೊಳ್ಳುವರು.KanCCh 230.4